ಕೋಡಿ ಮಠದ ಸ್ವಾಮೀಜಿ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಬಗ್ಗೆ ನುಡಿದ ಭವಿಷ್ಯ | Oneindia Kannada

2018-01-09 2

ಒಗಟಿನ ಮೂಲಕ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳಲ್ಲಿ, ನೀವು ಹೇಳಿದ್ದು ಏನೂ ಅರ್ಥವಾಗಿಲ್ಲ, ಸ್ವಲ್ಪ ಬಿಡಿಸಿ ಹೇಳಿ ಸ್ವಾಮಿ.. ಅಂದರೆ ಉತ್ತರ ಕೊಡದೇ ಮುಗುಳ್ನಗುತ್ತಾ ಕಾರು ಹತ್ತಿಕೊಂಡು ಹೋದ ಹಲವು ನಿದರ್ಶನಗಳಿವೆ.ಅಂದು ಹೇಳಿದ್ದ ಭವಿಷ್ಯದ ಬಗ್ಗೆ ನಾನು ವಿವರಿಸಿರಲಿಲ್ಲ, actually ನಾನು ನುಡಿದದ್ದು ಸತ್ಯವಾಯಿತು ನೋಡಿ ಎಂದು ಘಟನೆ ನಡೆದ ನಂತರ ಹೇಳಿದ ಉದಾಹರಣೆಗಳೂ ಇವೆ. ಅಂತಹ ಉದಾಹರಣೆಗಳಿಗೊಂದು ಮತ್ತೊಂದು ಸೇರ್ಪಡೆಯಾಗಿದೆ.ಕಳೆದ ಭಾನುವಾರ (ಜ 7) ಚನ್ನರಾಯಪಟ್ಟಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಶ್ರೀಗಳು, ಒಂದು ವರ್ಷದ ಹಿಂದೆ ನಾನು ಹೇಳಿದ ಭವಿಷ್ಯ ನಿಜವಾಗಿದೆ. ಆ ಭವಿಷ್ಯ ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ ಎಂದು ಶ್ರೀಗಳು ಹೇಳಿದ್ದಾರೆ.ಹಾಸನದಲ್ಲಿ ಒಂದು ವರ್ಷದ ಹಿಂದೆ, 'ಬಿತ್ತಿದ ಬೆಳಸು ಪರರು ಕುಯ್ದಾರು' ಎಂದು ನುಡಿದಿದ್ದೆ. ನಾನು ಗುಜರಾತ್ ಮತ್ತು ಉತ್ತರಪ್ರದೇಶದ ಚುನಾವಣೆಯನ್ನು ಉಲ್ಲೇಖಿಸಿ ಆ ಮಾತನ್ನು ಹೇಳಿದ್ದು ಎಂದು ಕೋಡಿಶ್ರೀಗಳು ನುಡಿದಿದ್ದಾರೆ.
Sri. Shivananada Shivayogi Rajendra Seer of Kodi Mutt prediction on EVM ( Electronic Voting Machine ) in upcoming Karnataka Assembly elections 2018. Kodi Seer said, chances of misusing of EVM is high.

Free Traffic Exchange

Videos similaires